SRINIVAS COLLEGE ORGANISES MAGMA – 2018

MAGMA – 2018, a one day National Annual Management festival of Srinivas Institute of Management Studies was held on Tuesday 30th October, 2018 at Pandeshwar Campus. The theme for this year’s event was “MAGMA – Samurai – Conquer with Perfections” primarily focused on present day business challenges and work environment in business and industries. The festival was inaugurated by the Chief Guest Sri Nanjundappa Thimmayya, Regional Head, Union Bank of India, Mangaluru. In his inaugural address he stressed on the concepts of Japanese Samurai techniques and martial arts which are used in work environments to ensure commandable results.  He also motivated the participants to approach events with Shaolin tactics.  The President of the function Dr. A. Srinivas Rao, who is also the Pro-chancellor of Srinivas University and Vice President of A. Shama Rao Foundation delivering his presidential remarks, bought out the dynamic skills used in Samurai arts to be used in meeting the challenges. He also pressed that both victory or defeat are to be taken in an equal spirit. 

            The Vice Chancellor of Srinivas University Dr. P. S. Aithal delivered the importance of these management events for the upcoming management professionals. He also elaborated the various research theories used in commerce, business and management which could be a solution to Chakravyuha.  Prof. Shailashri, Dean, Commerce Management and Coordinator, MBA department welcomed the gathering. Prof. Sagar Srinivas, Faculty Convenor of MAGMA, 2018 gave the theme of the event.   Magma Student Co-ordinator Mr. Wilson Lasrado delivered the Vote of Thanks.  Ms. Swathi K. Pradeep, President, MBA Student Council was present on the dias.  MBA Students from about 21 top National Management Institutions and Business Schools participated in the event.

 

ಶ್ರೀನಿವಾಸ ಕಾಲೇಜಿನಲಿ MAGMA – 2018 ಅಂತರ ಕಾಲೇಜು ಸ್ಪರ್ಧೋತ್ಸವ

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ (ಸಿಮ್ಸ್) ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗಾಗಿ ಮ್ಯಾಗ್ಮಾ – 2018 ರಾಷ್ಟ್ರೀಯ ಮಟ್ಟದ ಒಂದು ದಿನದ ಅಂತರ ಕಾಲೇಜು ಸ್ಪರ್ಧೋತ್ಸವವು ದಿನಾಂಕ 30.10.2018 ರಂದು ನಡೆಯಿತು. ಎಂ.ಬಿ.ಎ. ವಿಭಾಗದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೋತ್ಸವವನ್ನು ಪೂರ್ವಾಹ್ನ 10.00 ಘಂಟೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾಂತೀಯ ಮುಖ್ಯಸ್ಥರಾದ ಶ್ರೀ ನಂಜುಂಡಪ್ಪ ತಿಮ್ಮಯ್ಯ ಇವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಶ್ರೀಯುತರು ವಿದ್ಯಾರ್ಥಿಗಳು ಮ್ಯಾಗ್ಮಾದ ಶೀರ್ಷಿಕೆಯಾದ ಸಮುರಾಯ್ ತಂತ್ರಗಳನ್ನು ತಮ್ಮ ಮುಂದಿನ ವ್ಯಾವಹಾರಿಕ ಹಾಗೂ ಉದ್ಯೋಗೀಯ ಕ್ಷೇತ್ರದಲ್ಲಿ ಅಳವಡಿಸಿಕೊಂಡಲ್ಲಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಾಗುವ ವಿವಿಧ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದರು. ಅವರು ಮುಂದುವರಿದು ವಿದ್ಯಾರ್ಥಿಗಳು ಮ್ಯಾಗ್ಮಾದಂತಹ ಸ್ಪರ್ಧೋತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಾಯೋಗಿಕವಾಗಿ ಉತ್ತಮ ರೀತಿಯಲ್ಲಿ ಸಜ್ಜುಗೊಂಡು ನಾಯಕತ್ವ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪ ಕುಲಾಧಿಪತಿಗಳು ಮತ್ತು ಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ಡಾ. ಎ. ಶ್ರೀನಿವಾಸ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಯುತರು ಸಮುರಾಯ್ ತಂತ್ರಗಳನ್ನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಎದುರಾಗುವ ಸೋಲು ಗೆಲುವುಗಳೆರಡನ್ನೂ ಸಮಾನ ರೀತಿಯಲ್ಲಿ ಸ್ವೀಕರಿಸಲು ಸಹಾಯವಾಗುತ್ತದೆ ಎಂದರು. ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ.ಎಸ್. ಐತಾಳ್ ಮಾತನಾಡಿ ಮ್ಯಾಗ್ಮಾದಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರಲ್ಲದೆ, ವಿದ್ಯಾರ್ಥಿಗಳು ಸಂಶೋಧನೆಗಳಲ್ಲೂ ತೊಡಗಿಸಿಕೊಂಡಲ್ಲಿ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸುಲಭವಾಗುತ್ತದೆ ಎಂದರು. ವಾಣಿಜ್ಯ ವ್ಯವಹಾರ ಆಡಳಿತ ವಿಭಾಗದ ಡೀನ್ ಮತ್ತು ಎಂಬಿಎ ವಿಭಾಗದ ಮುಖ್ಯಸ್ಥೆಯಾದ ಪ್ರೊ. ಶೈಲಶ್ರೀ ವಿ.ಟಿ. ನೆರೆದ ಸಭಿಕರನ್ನು ಸ್ವಾಗತಿಸಿದರು. ಮ್ಯಾಗ್ಮಾದ ಸಂಚಾಲಕರಾದ ಪ್ರೊ. ಸಾಗರ್ ಶ್ರೀನಿವಾಸ್ ಮ್ಯಾಗ್ಮಾ 2018 ರ ಶೀರ್ಷಿಕೆಯ ವಿವರಗಳನ್ನು ಸಭಿಕರಿಗೆ ತಿಳಿಸಿದರು. ಮ್ಯಾಗ್ಮಾ ವಿದ್ಯಾರ್ಥಿ ಸಂಚಾಲಕರಾದ ಎಂಬಿಎ ವಿದ್ಯಾರ್ಥಿ ಶ್ರೀ ವಿಲ್ಸನ್ ಲಸ್ರಾದೊ ವಂದನಾರ್ಪಣೆಗೈದರು. ಎಂಬಿಎ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷೆಯಾದ ಕು. ಸ್ವಾತಿ ಪ್ರದೀಪ್ ವೇದಿಕೆಯಲ್ಲಿದ್ದರು. ಸುಮಾರು 21 ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೋತ್ಸವದಲ್ಲಿ ಪಾಲ್ಗೊಂಡು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರೌಢಿಮೆ ಪ್ರದರ್ಶಿಸಿದರು.