NATIONAL LEVEL CONFERENCE AT SRINIVAS COLLEGE ON 6TH AUGUST, 2018

A One day National Conference on the theme “Emerging Areas of IT Applications in Management, Education & Social Sciences” was organized in the College on 06.10.2018 Saturday at Pandeshwar Campus.  The Chief Guest for the function was Sri Venkat Bhat, CEO, VentureSoft Global, California, USA.

In his inaugural address he spoke on the Emerging areas of different IT Innovations, like solar and battery car, IOT in Fisheries and Augmented Reality, Artificial Intelligence and Its Applications on Management, Education and Social Science. He also shared his vast experience in the field of IT and its applications in different real time applications.  Dr. Shashidhar Kini K, Professor & Head of MCA Department, Srinivas Institute of Technology, Mangalore was the Guest of Honor and key-note speaker who emphasized on E-governance. He mentioned history, types of E-governance and different hurdles and challenges face in India to implement full-fledged E-governance system. Dr. P.S. Aithal, Vice Chancellor of Srinivas University and Principal, SIMS presided over the function. Dr. Aithal stressed his research views on publication and contribution of research to societies. He further expressed his desire on research based educational qualifications for the graduating youths for maximizing their employment potential. The Convenor of the Conference Prof. P. Sridhara Acharya introduced the theme of the Conference to the delegates.  Prof. Vaikunta Preyesh Pai, Coordinator, MCA Department, welcomed the delegates.  Sri Ganapathi Bhat, Freelancer, was present on the occasion and graced. Dr. Krishna Prasad K, Conference Co-convenor, proposed vote of thanks. The proceeding of the previous Conference was released along with the Abstract proceedings of the current Conference.  The research scholars and teaching faculties presented the papers in the conference.  More than 45 research papers were received and presented in the conference.  All the papers presented will be published after review in international journals along with ISBN proceedings.

 

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಒಂದು ದಿನದ ರಾಷ್ಟ್ರ ಮಟ್ಟದ ಸಮ್ಮೇಳನ

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ (ಸಿಮ್ಸ್) ನಲ್ಲಿ “ಎಮರ್ಜಿಂಗ್ ಏರಿಯಾಸ್ ಆಫ್ ಐಟಿ ಅಪ್ಲಿಕೇಶನ್ಸ್ ಇನ್ ಮ್ಯಾನೇಜ್‍ಮೆಂಟ್, ಎಜುಕೇಶನ್ ಆಂಡ್ ಸೋಶಿಯಲ್ ಸಯನ್ಸಸ್ ” ಎಂಬ ಶೀರ್ಷಿಕೆಯಡಿ ಒಂದು ದಿನದ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ದಿನಾಂಕ 6ನೇ ಅಕ್ಟೋಬರ್, 2018 ರಂದು ಏರ್ಪಡಿಸಲಾಗಿತ್ತು. ಈ ಸಮ್ಮೇಳನದ ಉದ್ಘಾಟನೆಯನ್ನು ದಿನಾಂಕ 06.10.2018 ರಂದು ಪೂರ್ವಾಹ್ನ 10.00 ಘಂಟೆಗೆ ಅಮೇರಿಕಾದ ವೆಂಚರ್ ಸಾಫ್ಟ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ವೆಂಕಟ ಭಟ್ ಇವರು ನೆರವೇರಿಸಿದರು. ಶ್ರೀಯುತರು ತಮ್ಮ ಉದ್ಘಾಟನಾ ಭಾಷಣದಲ್ಲಿ ಶ್ರೀಯುತರು ಆಧುನಿಕ ತಂತ್ರಜ್ನಾನ ಮತ್ತು ಮಾಹಿತಿ ತಂತ್ರಜ್ನಾನ ಕ್ಷೇತ್ರದಲ್ಲಾಗುವ ಹೊಸ ಆವಿಷ್ಕಾರ ಮತ್ತು ಅನ್ವೇಷಣೆಗಳ ಬಗ್ಗೆ ಮಾತನಾಡಿದರಲ್ಲದೆ ಇದರಿಂದ ವ್ಯವಹಾರ ಆಡಳಿತ ಮತ್ತು ಸಾಮಾಜಿಕ ವಿಜ್ನಾನದ ಮೇಲಾಗುವ ಪ್ರಭಾವಗಳನ್ನು ವಿವರಿಸಿದರು. ಶ್ರೀನಿವಾಸ ತಾಂತ್ರಿಕ ವಿಶ್ವವಿದ್ಯಾನಿಲಯದ ಎಂಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ಶಶಿಧರ ಕಿಣಿ ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದು ದಿಕ್ಸೂಚಿ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಅವರು ಇ-ಗವರ್ನೆನ್ಸ್ ಮತ್ತು ಇದರಿಂದ ಇಂದಿನ ಜಗತ್ತಿನ ವಿದ್ಯಾರ್ಥಿಗಳಿಗೆ ಎದುರಾಗುವ ಸವಾಲುಗಳು ಮತ್ತು ಅಡೆತಡೆಗಳ ಬಗ್ಗೆ ಪ್ರಸ್ತಾವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಕೇವಲ ಪದವಿ ಗಳಿಸುವುದನ್ನೇ ಮುಖ್ಯವಾಗಿರಿಸಿಕೊಳ್ಳದೆ ಸಂಶೋಧನೆಯಲ್ಲಿ ತೊಡಗಿ ಹೊಸ ಹೊಸ ಆವಿಷ್ಕಾರಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗಮನ ಹರಿಸಬೇಕೆಂದರು. ಅವರು ಮುಂದುವರಿದು ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾತ್ಮಕ ವಿಷಯಗಳನ್ನು ಅಳವಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಉತ್ತಮ ಉದ್ಯೋಗ ಪಡೆದು ಉತ್ತಮ ನಾಗರಿಕರಾಗುವುದರಲ್ಲಿ ಸಂಶಯವಿಲ್ಲ ಎಂದರು. ಸಮ್ಮೇಳನದ ಸಂಯೋಜಕರು ಮತ್ತು ಗಣಕ ಯಂತ್ರ ವಿಭಾಗದ ಡೀನ್ ಪ್ರೊ. ಶ್ರೀಧರ ಆಚಾರ್ಯ ಸಮ್ಮೇಳನದ ಶೀರ್ಷಿಕೆಯ ಸ್ಥೂಲ ಪರಿಚಯ ನೀಡಿದರು. ಎಂಸಿಎ ವಿಭಾಗದ ಸಂಚಾಲಕರಾದ ಪ್ರೊ. ವೈಕುಂಠ ಪೈ ನೆರೆದ ಸಭಿಕರನ್ನು ಸ್ವಾಗತಿಸಿದರು. ಫ್ರೀಲಾನ್ಸರ್ ಶ್ರೀ ಗಣಪತಿ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಉಪ ಸಂಯೋಜಕರಾದ ಡಾ. ಕೆ. ಕೃಷ್ಣ ಪ್ರಸಾದ್ ವಂದಿಸಿದರು.

ಈ ಸಮ್ಮೇಳನದಲ್ಲಿ ಇಂದಿನ ಸಮ್ಮೇಳನದ ಸಂಶೋಧನೆಯ ಸಂಕ್ಷಿಪ್ತ ಸಾರವಿರುವ ಪುಸ್ತಿಕೆ ಹಾಗೂ ಹಿಂದೆ ನಡೆದ ಸಮ್ಮೇಳನದ ಪ್ರಬಂಧಗಳನ್ನೊಳಗೊಂಡ ಸಮಗ್ರ ಕೈಪಿಡಿಯನ್ನು ಬಿಡುಗಡೆ ಗೊಳಿಸಲಾಯಿತು. ಈ ಸಮ್ಮೇಳನದಲ್ಲಿ ದೇಶದ ವಿವಿಧೆಡೆಗಳಿಂದ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು, ಉಪನ್ಯಾಸಕರು ವಿಷಯ ತಜ್ಞರು ಮತ್ತು ವಿದ್ಯಾರ್ಥಿಗಳಿಂದ 45 ಕ್ಕಿಂತಲೂ ಅಧಿಕ ಸಂಶೋಧನಾ ಪ್ರಬಂಧಗಳು ಮಂಡಿತವಾದವು.