The College of Computer & Information Science of Srinivas University has organized a two day National conference on the theme“Developments in Information Technology, Management,  Social Science and Education” on 21st and 22nd of December 2018 at City Campus, Pandeshwar, Managalore. Sri Nagaraja Thantry,Chief Manager SBI, Mangalore has inaugurated the conference. In his inaugural address he spoke about the importance of the Information Technology in the banking industry. He also spoke about his experience in the banking sector without the IT and the advantages and various opportunities with the IT. The guest of honor Mr. G. K. Bhat, Director, Kakunje Software shared his knowledge in the field of core IT and IT product patenting. Dr. P. K. Paul,Asst. Professor and the Director of Research center of RaiganjUniversity, West Bengal has given idea about the various new courses and suggested some top-up courses which can be introduced from the Universities. Dr. P. S. Aithal, Vice Chancellor of the University highlighted the importance of research in the higher education fields. Prof.SubrahmanyaBhat, Faculty Convenor of the Conference  spoke about the importance of the conference. Prof. P. Sridhara Acharya welcomed the guests and Dr. Krishna Prasad K. rendered vote of thanks. Prof. Panchajanyeswari Achar was the master of ceremony for the function. More than 30 research scholars, teaching faculties and MCA students presented their papers.

ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಸಮ್ಮೇಳನ

 

ಶ್ರೀನಿವಾಸ ವಿಶ್ವವಿದ್ಯಾನಿಲಯದ ಗಣಕಯಂತ್ರ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ದಿನಾಂಕ ಡಿಸೆಂಬರ್ 21 ಮತ್ತು 22ರಂದು ಮಾಹಿತಿ ತಂತ್ರಜ್ಞಾನ ನಿರ್ವಹಣೆ, ಸಾಮಾಜಿಕ ವಿಜ್ಞಾನ ಮತ್ತು ಶೈಕ್ಷಣಿಕ ರಂಗ” ಎನ್ನುವ ಶೀರ್ಷಿಕೆಯಡಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸ್ಟೇಟ್ ಬ್ಯಾಂಕ್‍ ಆಫ್‍ ಇಂಡಿಯಾದ ವ್ಯವಸ್ಥಾಪಕರಾದ ಶ್ರೀ ನಾಗರಾಜ ತಂತ್ರಿಯವರು ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡುತ್ತಾ ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಹಾಗೂ ಉಪಯೋಗದ ಬಗ್ಗೆ ಬ್ಯಾಂಕಿಂಗ್ ವಲಯವನ್ನು ಉದಾಹರಿಸಿದರು. ಹಿಂದಿನ ಕಾಲದ ಲೆಡ್ಜರ್‍ಯುಗದಿಂದ ಹಿಡಿದು ಇಂದಿನ ತಂತ್ರಜ್ಞಾನದ ಯುಗದವರೆಗೆ ಬ್ಯಾಂಕಿಂಗ್‍ಕ್ಷೇತ್ರದಲ್ಲಾದ ಬದಲಾವಣೆಗಳನ್ನು ವಿಶದೀಕರಿಸಿದರು. ಮುಖ್ಯಅತಿಥಿಯಾಗಿ ಆಗಮಿಸಿದ್ದ ಕಕ್ಕುಂಜೆ ಸಾಪ್ಟ್‌ವೇರ್‍ನ ನಿರ್ದೇಶಕರಾದ ಶ್ರೀ ಜಿ.ಕೆ. ಭಟ್ ಮಾತನಾಡಿಮಾಹಿತಿ ತಂತ್ರಜ್ಞಾನದ ಅನೇಕ ಮಜಲುಗಳ ಅನ್ವೇಷಣೆ ಹಾಗೂ ಉಪಯೋಗಗಳ ಬಗ್ಗೆ ಉದಾಹರಣೆ ಸಹಿತವಾಗಿ ವಿವರಿಸಿದರು. ಪಶ್ಚಿಮ ಬಂಗಾಳದ ರಾಯ್‍ಗಂಜ್ ವಿಶ್ವವಿದ್ಯಾನಿಲಯದ ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರಂಟೋಶ್ ಪೌಲ್ ವಿಶೇಷ ಅಭ್ಯಾಗತರಾಗಿ ಸಭೆಯಲ್ಲಿ ಉಪಸ್ಥಿತರಿದ್ದು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಲ್ಲಿ ಕಲಿಕೆಯಗುಣಮಟ್ಟವನ್ನುಉನ್ನತೀಕರಿಸಲು ನವೀನಾತ್ಮಕ ಪಠ್ಯ ಕ್ರಮಗಳ ಅಳವಡಿಕೆಯ ಅಗತ್ಯತೆಯನ್ನು ಬೆಟ್ಟು ಮಾಡಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಪಿ.ಎಸ್. ಐತಾಳ್ ತಮ್ಮ ಭಾಷಣದಲ್ಲಿಉನ್ನತ ಶಿಕ್ಷಣದಲ್ಲಿ ಹೊಸ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಯ ಮಹತ್ವಗಳ ಬಗ್ಗೆ ತಿಳಿಸಿದರು. ಸಮ್ಮೇಳನದ ಸಂಚಾಲಕರಾದ ಪ್ರೊ. ಸುಬ್ರಹ್ಮಣ್ಯ ಭಟ್ ಸಮ್ಮೇಳನದ ಮಹತ್ವವನ್ನು ವಿವರಿಸಿದರು.ಗಣಕಯಂತ್ರ ವಿಭಾಗದಡೀನ್ ಪ್ರೊ. ಪಿ. ಶ್ರೀಧರ ಆಚಾರ್ಯ ಸ್ವಾಗತಿಸಿದರು.ಪ್ರಾಧ್ಯಾಪಕರಾದಡಾ.ಕೃಷ್ಣ ಪ್ರಸಾದ್ ವಂದನಾರ್ಪಣೆಗೈದರು. ಪ್ರಾಧ್ಯಾಪಕಿ ಶ್ರೀಮತಿ ಪಾಂಚಜನ್ಯೇಶ್ವರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಸುಮಾರು 30ಕ್ಕೂ ಹೆಚ್ಚು ಅಧಿಕ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು.