Orientation program for PG Students at Srinivas University

Mangalore, August 4 : orientation program for the post-graduation programs Srinivas University (MBA, MCA& MSW) was held at Srinivas city campus, Pandeshwar on 4th September. The program was inaugurated by Sri CA. A. Raghavendra Rao, Chancellor, Srinivas University. He addressed the gathering and insisted that the students should make use of every opportunity in the campus for their development. Dr. A. Srinivas Rao, Pro-Chancellor, Srinivas University after administering the oath to the newly joined students, highlighted the university\’s uniqueness in terms of super specializations in his address. Dr. P. S. Aithal, Vice Chancellor, Srinivas University motivated the students to be a part of all activities and encouraged the PG students to be innovators. Mr. Ajith Kumar, CEO, Solarizer biz and alumni of Srinivas Institute of Management Studies was the Guest of Honor. He stressed upon students to be self-motivated, to enjoy the process of learning and to have the right goal as a student. The Dean of College of Management and Commerce Dr. Shailashree V.T., Dean of College of Computer science and Information Science Prof. Shridhar Acharya, Dean of College of Social Science and Humanities Dr. Laveena D. Mello also addressed the students on the occasion and highlighted the structure and the curriculum of their respective courses. Prof. Keerthan Raj, Co-ordinator of the M.Com program welcomed the gathering. Prof. Subrahmanya Bhat, Coordinator of MCA, proposed the vote of thanks and Ms. Vanditha & Mr. Karthik, students of Post-Graduation course compered the program. Date: 4th September 2019 Place: Pandeshwar, Mangalore.


ಶ್ರೀನಿವಾಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಮಂಗಳೂರು, ಆ. 04 : ಶ್ರೀನಿವಾಸ್ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್‍ನಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿಭಾಗದ ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಕಾಲೇಜಿನ ಗ್ಯಾಲರಿ ಹಾಲ್‍ನಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎ. ಎ. ರಾಘವೇಂದ್ರ ರಾವ್‍ರವರು ಉದ್ಘಾಟಿಸಿ, ಕ್ಯಾಂಪಸ್‍ನಲ್ಲಿ ದೊರಕುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್‍ರವರು ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜಿನ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕುಲಪತಿ ಡಾ. ಪಿ. ಎಸ್. ಐತಾಳ್ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಾತನಾಡಿದರು. ಗೌರವ ಅತಿಥಿಯಾಗಿ ಸೋಲರೈಸರ್ ಬಿಸ್‍ನ ಸಿ.ಇ.ಓ. ಅಜಿತ್ ಕುಮಾರ್ ಆಗಮಿಸಿದ್ದರು. ಈ ವೇಳೆ ಸಿ.ಸಿ.ಐ.ಎಸ್. ನ ಡೀನ್ ಫ್ರೊ. ಶ್ರೀಧರ್ ಆಚಾರ್ಯ, ಸಿ.ಎಸ್.ಎಸ್.ಹೆಚ್.ನ ಡೀನ್ ಡಾ. ಲವೀನ, ಸಿ.ಎಂ.ಸಿ. ಯ ಡೀನ್ ಡಾ ಶೈಲಶ್ರೀ ವಿ.ಟಿ. ಕಾಲೇಜಿನ ಅದ್ಯಾಪಕರು ಉಪಸ್ಥಿತರಿದ್ದರು.